ಇಂತಹ ವಿಷಯಕ್ಕೆ ಕಣ್ರೀ ಪ್ರಿಯಾಮಣಿ ನಮಗೆ ಇಷ್ಟ ಆಗೋದು.!

Header Banner

ಇಂತಹ ವಿಷಯಕ್ಕೆ ಕಣ್ರೀ ಪ್ರಿಯಾಮಣಿ ನಮಗೆ ಇಷ್ಟ ಆಗೋದು.!

  Thu May 11, 2017 11:18        Entertainment, Kannada

ಹೆಂಗಸರ ವಯಸ್ಸು ಕೇಳಬಾರದು... ಗಂಡಸರ ಸಂಬಳ ಕೇಳಬಾರದು' ಎಂಬ ಗಾದೆ ಮಾತಿದೆ. ಗಾದೆಗೆ ತಕ್ಕ ಹಾಗೆ ಎಷ್ಟೋ ನಟಿಯರು ತಮ್ಮ ವಯಸ್ಸನ್ನ ಬಹಿರಂಗ ಪಡಿಸುವುದಿಲ್ಲ

ವಯಸ್ಸು ಎಷ್ಟು ಅಂತ ಹೇಳಿಬಿಟ್ಟರೆ, ಆಫರ್ ಗಳು ಕಮ್ಮಿ ಅಗ್ಬಹುದೇನೋ ಎಂಬ ಅಳುಕು ಅನೇಕ ನಟಿಯರಲ್ಲಿ ಇರಬಹುದು. ಆದ್ರೆ, ಈ ತರಹದ ಅಳುಕು, ಅಂಜಿಕೆ ಮಾತ್ರ ನಟಿ ಪ್ರಿಯಾಮಣಿ ರವರಿಗೆ ಇಲ್ಲವೇ ಇಲ್ಲ.! ಅದಕ್ಕೆ ಸಾಕ್ಷಿ ಮೊನ್ನೆಯಷ್ಟೇ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮ.

ಸಾಮಾನ್ಯವಾಗಿ ಸಾಧಕರ ಸೀಟ್ ಮೇಲೆ ಕೂತ ತಕ್ಷಣ, ಅತಿಥಿಗಳ ಪರಿಚಯ ಮಾಡಿಕೊಡುವಾಗ, ಜನ್ಮ ದಿನಾಂಕವನ್ನ ನಟ ರಮೇಶ್ ಅರವಿಂದ್ ಹೇಳುತ್ತಾರೆ. ಅದರಂತೆಯೇ, ಪ್ರಿಯಾಮಣಿ ಸಾಧಕರ ಸೀಟ್ ಮೇಲೆ ಕೂತಾಗ ''ಪ್ರಿಯಾಮಣಿ ಹುಟ್ಟಿದ್ದು ಜೂನ್ 4....'' ಅಂತಷ್ಟೇ ಹೇಳಿ ಪ್ರಿಯಾಮಣಿ ಮುಖ ನೋಡಿ ''ವರ್ಷ ಹೇಳಬಹುದಾ.?'' ಅಂತ ಕೇಳಿದರು.

ಅದಕ್ಕೆ ಕೊಂಚ ಕೂಡ ಹಿಂದು ಮುಂದು ನೋಡದ ಪ್ರಿಯಾಮಣಿ, ''ಪರ್ವಾಗಿಲ್ಲ ಹೇಳಿ... ನೋ ಪ್ರಾಬ್ಲಂ... ನೀವು ಹೇಳ್ತೀರಾ, ಇಲ್ಲ ನಾನೇ ಹೇಳ್ಲಾ.?'' ಎಂದು ಹೇಳುತ್ತಾ, ''ನಾನು ಹುಟ್ಟಿದ್ದು 1984 ನಲ್ಲಿ'' ಎಂದು ಬಹಿರಂಗ ಪಡಿಸಿದರು ನಟಿ ಪ್ರಿಯಾಮಣಿ.

'ಇಂತಹ ವಿಷಯಕ್ಕೆ ಕಣ್ರೀ ಪ್ರಿಯಾಮಣಿ ನಮಗೆ ಇಷ್ಟ ಆಗೋದು.!' ಎಂದು ಹೇಳುತ್ತಾ ಪ್ರಿಯಾಮಣಿ ರವರ ಈ ಬೋಲ್ಡ್ ಆಟಿಟ್ಯೂಡ್ ಗೆ ಕ್ಲೀನ್ ಬೌಲ್ಡ್ ಆದವರು ಅದೆಷ್ಟೋ ಮಂದಿ.


   priyamani, weekend with ramesh 3, weekend with ramesh, zee kannada, tv, reality show, ವೀಕೆಂಡ್ ವಿತ್ ರಮೇಶ್ 3, ವೀಕೆಂಡ್ ವಿತ್ ರಮೇಶ್, ಜೀ ಕನ್ನಡ, ಟಿವಿ, ರಿಯಾಲಿಟಿ ಶೋ, ಪ್ರಿಯಾಮಣಿ