ಚುನಾವಣೆಯಲ್ಲಿ ನನ್ನೆದುರು ನೇರವಾಗಿ ಸ್ಪರ್ಧಿಸಿ: ಕೇಜ್ರಿವಾಲ್'ಗೆ ಕಪಿಲ್ ಮಿಶ್ರಾ ಬಹಿರಂಗ ಪತ್ರ

Header Banner

ಚುನಾವಣೆಯಲ್ಲಿ ನನ್ನೆದುರು ನೇರವಾಗಿ ಸ್ಪರ್ಧಿಸಿ: ಕೇಜ್ರಿವಾಲ್'ಗೆ ಕಪಿಲ್ ಮಿಶ್ರಾ ಬಹಿರಂಗ ಪತ್ರ

  Tue May 09, 2017 15:12        Kannada

ಆಮ್ ಆದ್ಮಿ ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮುಕ್ತ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಂಗಳವಾರ ಸವಾಲು ಹಾಕಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನೂ ನನ್ನ ಶಾಸಕತ್ವಕ್ಕೆ ರಾಜೀನಾಮೆಯನ್ನು ನೀಡುತ್ತೇನೆ. ನೀವೂ ನಿಮ್ಮ ಶಾಸಕತ್ವಕ್ಕೆ ರಾಜೀನಾಮೆಯನ್ನು ನೀಡಿ. ನಾವಿಬ್ಬರೂ ಪರಿಸ್ಪರ ಎದುರಾಳಿಗಳಾಗಿ ಮುಕ್ತ ಚುನಾವಣೆಯಲ್ಲಿ ಹೋರಾಡೋಣ ಎಂದು ಕೇಜ್ರಿವಾಲ್ ಅವರಿಗೆ ಕಪಿಲ್ ಮಿಶ್ರಾ ಬಹಿರಂಗ ಸವಾಲೆಸೆದಿದ್ದಾರೆ.

ಕೇಜ್ರಿವಾಲ್ ಅವರಿಗ ಈ ಮೂಲಕ ಮುಕ್ತ ಪತ್ರವನ್ನು ರವಾನಿಸುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೇಗೆ ಹೋರಾಟ ಮಾಡಬೇಕೆಂದು ಪಾಠ ಹೇಳಿಕೊಟ್ಟಂತಹ ಗುರುವಿನ ವಿರುದ್ಧವೇ ಇಂದು ನಾನು ಎಫ್ಐಆರ್ ದಾಖಲಿಸಲು ಹೋಗುತ್ತಿದ್ದೇನೆ. ಕೇಜ್ರಿವಾಲ್ ಅವರು ನನ್ನ ಗುರಿ. ಇಂದು ನಾನು ಅವರ ವಿರುದ್ಧವೇ ಹೋರಾಟ ಮಾಡುತ್ತಿದ್ದೇನೆ. ಇದು ನಿಜಕ್ಕೂ ಬಹಳ ನೋವನ್ನು ತಂದಿದೆ. ಆದರೆ, ನಾನು ಸುಮ್ಮನೆ ಕೂರುವುದಿಲ್ಲ. ಗುರುವಿನ ವಿರುದ್ದ ಎಫ್ಐಆರ್ ದಾಖಲಿಸಲು ಹೋಗುತ್ತಿದ್ದೇನೆ. ಗುರುಗಳೇ (ಕೇಜ್ರಿವಾಲ್) ಈ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನನಗೆ ಜಯ ಸಿಗಲಿ ಎಂದು ನನಗೆ ಆಶೀರ್ವದಿಸಿ. ನಿಮ್ಮ ವಿರುದ್ಧ ಎಫ್ಐಆರ್ ದಾಖಲಿಸುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾರೆ.

ಎಸಿಬಿಗೆ ನಾನು ಪತ್ರ ಬರೆದಿರಲಿಲ್ಲ ಎಂದಿದ್ದರೆ, ನನ್ನನ್ನು ಸಂಪುಟದಿಂದ ಕೈಬಿಡುತ್ತಿರಲಿಲ್ಲ. ಕೇಜ್ರಿವಾಲ್ ಅವರ ವಿರುದ್ಧ ನನ್ನ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ದೆಹಲಿ ವಿಧಾನಸಭೆಯಲ್ಲಿ ಕೇಜ್ರಿವಾಲ್ ಅವರು ನಾನು ಮಾಡಿದ್ದ ಎಲ್ಲಾ ಆರೋಪಗಳಿಗೂ ಸ್ಪಷ್ಟನೆ ನೀಡಲಿದ್ದಾರೆ ಇದು ನನಗೆ ಗೊತ್ತಿದೆ. ಅಲ್ಲದೆ, ನಾನೊಬ್ಬ ಸುಳ್ಳುಗಾರ ಮತ್ತು ಭ್ರಷ್ಟನೆಂಬ ಪಟ್ಟವನ್ನೂ ನೀಡುತ್ತಿದ್ದಾರೆ. ಅವರ ತಂತ್ರಗಳ ಕುರಿತಂತೆ ನನಗೆ ಬಹಳ ತಿಳಿದಿದೆ.

ಸಂಪುಟದಿಂದ ಕೈಬಿಟ್ಟದ್ದರಿಂದ ನನ್ನ ಮೇಲೆ ಯಾವುದೇ ಪರಿಣಾಮಗಳಾಗಿಲ್ಲ. ಅಗತ್ಯ ಬಿದ್ದರೆ, ರಾಜಿನಾಮೆ ಸಲ್ಲಿಸಲು ನಾನು ಸಿದ್ಧನಿದ್ದೇನೆ. ನನ್ನ ಹೋರಾಟದಲ್ಲಿ ನಾನು ಏಕಾಂಗಿಯಾಗಿದ್ದೇನೆ. ಯಾವುದೇ ತ್ಯಾಗಕ್ಕಾಗದಲೂ ನಾನು ಸಿದ್ಧನಿದ್ದೇನೆ. ಆದರೆ, ನಿಮಗೆ (ಕೇಜ್ರಿವಾಲ್) ನಿಜಕ್ಕೂ ನೈತಿಕತೆ ಇದೆ ಎಂಬುದೇ ಆದರೆ, ನನ್ನ ಸವಾಲನ್ನು ಸ್ವೀಕರಿಸಿ ಮತ್ತು ಮುಕ್ತ ಚುನಾವಣೆಯಲ್ಲಿ ಸ್ಪರ್ಧಿಸಿ. ಜನಾದೇಶವನ್ನು ಸ್ವೀಕರಿಸುವ ಧೈರ್ಯ ನಿಮಗಿದೆಯೇ? ನಿಮಗೆ ಸೋಲುವ ಭಯವಿದ್ದರೆ, ರಾಜೀನಾಮೆಯನ್ನು ನೀಡದೆ ಬೇಕಾದರೂ ನೀವು ಚುನಾವಣೆಯಲ್ಲಿ ಸ್ಪರ್ಧಿಸಬಹುದು. ನಿಮ್ಮ ಪ್ರತಿಕ್ರಿಯೆಗಾಗಿ ನಾನು ಕಾಯುತ್ತೇನೆಂದು ತಿಳಿಸಿದ್ದಾರೆ.

kannadaprabha


   Kapil Mishra, Kejriwal, AAP, Open election, Challenge, ಕಪಿಲ್ ಮಿಶ್ರಾ, ಕೇಜ್ರಿವಾಲ್, ಆಪ್, ಮುಕ್ತ ಚುನಾವಣೆ, ಸವಾಲು