'ಮಲ್ಟಿಪ್ಲೆಕ್ಸ್' ಇತಿಹಾಸದಲ್ಲಿ ಯಾರು ಮಾಡಿರದ ದಾಖಲೆ ಬರೆದ 'ಚಕ್ರವರ್ತಿ'

Header Banner

'ಮಲ್ಟಿಪ್ಲೆಕ್ಸ್' ಇತಿಹಾಸದಲ್ಲಿ ಯಾರು ಮಾಡಿರದ ದಾಖಲೆ ಬರೆದ 'ಚಕ್ರವರ್ತಿ'

  Wed Apr 12, 2017 08:30        Cinemas, Kannada

'ಮಲ್ಟಿಪ್ಲೆಕ್ಸ್'ಗಳಲ್ಲಿ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ. ಕನ್ನಡ ಚಿತ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡುತ್ತಿಲ್ಲ. ಕನ್ನಡ ಸಿನಿಮಾಗಳನ್ನ ಕಡೆಗಣಿಸುತ್ತಿದೆ ಎಂಬ ಆರೋಪಗಳ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಹೊಸ ದಾಖಲೆ ಬರೆದಿದೆ.

ರಾಜ್ಯಾದ್ಯಂತ ದಾಖಲೆಯ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ 'ಚಕ್ರವರ್ತಿ' ಮೈಸೂರಿನಲ್ಲಿ ಹೊಸ ಇತಿಹಾಸ ಸೃಷ್ಠಿಸಿದೆ. ಅದೇನದು ಅಂತ ಮುಂದೆ ಓದಿ

'ಮಲ್ಟಿಪ್ಲೆಕ್ಸ್'ನಲ್ಲಿ ಮಧ್ಯರಾತ್ರಿ ಶೋ!

'ಮೈಸೂರಿನಲ್ಲಿ ಐನಾಕ್ಸ್ ಚಿತ್ರಮಂದಿರದಲ್ಲಿ ದರ್ಶನ್ ಅವರ 'ಚಕ್ರವರ್ತಿ' ಸಿನಿಮಾ 13ನೇ ತಾರೀಖು ಮಧ್ಯರಾತ್ರಿ ಬಿಡುಗಡೆಯಾಗುತ್ತಿದೆಯಂತೆ.

ಕನ್ನಡ ಇತಿಹಾಸದಲ್ಲಿ ಇದು ಮೊದಲು

ಮಲ್ಟಿಪ್ಲೆಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಮಧ್ಯರಾತ್ರಿ ಪ್ರದರ್ಶನವಾಗುತ್ತಿರುವುದು. ದಾಖಲೆಗಳ ಪ್ರಕಾರ ಇದುವರೆಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಯಾವುದೇ ಚಿತ್ರ ಮಧ್ಯರಾತ್ರಿ ಬಿಡುಗಡೆಯಾಗಿಲ್ಲ.

ಮಧ್ಯರಾತ್ರಿ 'ಚಕ್ರವರ್ತಿ' ರಿಲೀಸ್

ಕೇವಲ ಮೈಸೂರಿನ ಮಲ್ಟಿಪ್ಲೆಕ್ಸ್'ಗಳಲ್ಲಿ ಮಾತ್ರವಲ್ಲ, ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಚಕ್ರವರ್ತಿ ಮಧ್ಯರಾತ್ರಿ ರಿಲೀಸ್ ಆಗುತ್ತಿದ್ದು, ದಿನದ 24 ಗಂಟೆಯೂ ಸಿನಿಮಾ ಪ್ರದರ್ಶನವಾಗುತ್ತಿದೆ.

ಏಪ್ರಿಲ್ 14ಕ್ಕೆ 'ಚಕ್ರವರ್ತಿ' ಅಬ್ಬರ

'ಚಕ್ರವರ್ತಿ' ಇದೇ ತಿಂಗಳು 14ರಂದು ರಾಜ್ಯಾದ್ಯಂತ ದಾಖಲೆಯ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನ ಸಿದ್ದಾಂತ್ ನಿರ್ಮಾಣ ಮಾಡಿದ್ದಾರೆ. ದರ್ಶನ್, ದಿನಕರ್ ತೂಗುದೀಪ, ಸೃಜನ್ ಲೋಕೇಶ್, ಕುಮಾರ್ ಬಂಗಾರಪ್ಪ, ಚಾರುಲತಾ, ದೀಪಾ ಸನ್ನಿಧಿ, ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.


   darshan, dinakar toogudeepa, deepa sannidhi, aditya, charulatha, sandalwood, ದರ್ಶನ್, ದಿನಕರ್ ತೂಗುದೀಪ, ದೀಪಾ ಸನ್ನಿಧಿ, ಆದಿತ್ಯ, ಚಾರುಲತಾ, ಸ್ಯಾಂಡಲ್ ವುಡ್