'ಚಕ್ರವರ್ತಿ' ಟಿಕೆಟ್ ಈಗಲೇ ಬುಕ್ ಮಾಡಿ, ಸ್ವಲ್ಪ ಲೇಟಾದ್ರು ನಿರಾಸೆ ಗ್ಯಾರೆಂಟಿ!

Header Banner

'ಚಕ್ರವರ್ತಿ' ಟಿಕೆಟ್ ಈಗಲೇ ಬುಕ್ ಮಾಡಿ, ಸ್ವಲ್ಪ ಲೇಟಾದ್ರು ನಿರಾಸೆ ಗ್ಯಾರೆಂಟಿ!

  Tue Apr 11, 2017 12:29        Cinemas, Kannada

ಚಕ್ರವರ್ತಿ' ಚಿತ್ರವನ್ನ ಫಸ್ಟ್ ಡೇ ಫಸ್ಟ್ ನೋಡಬೇಕು ಅಂತ ತುದಿಗಾಲಿನಲ್ಲಿ ಕಾಯುತ್ತಿರುವವರಿಗೆ ಒಂದು ಗುಡ್ ನ್ಯೂಸ್. ಏನಪ್ಪಾ ಅಂದ್ರೆ, ''ಚಕ್ರವರ್ತಿ'' ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. 'ಚಕ್ರವರ್ತಿ' ಬಿಡುಗಡೆಗೆ ಇನ್ನೂ ಮೂರ್ನಾಲ್ಕು ದಿನ ಟೈಮ್ ಇದೆ'' ಅಂತ ನೀವೇನಾದರೂ ಉದಾಸೀನ ಮಾಡಿದ್ರೆ... ಲಾಸ್ ಆಗೊದು ನಿಮಗೆ.!

ಯಾಕಂದ್ರೆ, 'ಚಕ್ರವರ್ತಿ' ಬುಕ್ಕಿಂಗ್ ಓಪನ್ ಆಗಿರುವುದು ಕೇವಲ ಬೆರಳೆಣಿಕೆಯ ಚಿತ್ರಮಂದಿರಗಳಲ್ಲಿ ಮಾತ್ರ. ಅದರಲ್ಲೂ ಈಗಾಗಲೇ ಕೆಲವು ಶೋ ಸೋಲ್ಡ್ ಔಟ್ ಆಗಿವೆ. ಅಷ್ಟಕ್ಕೂ, 'ಚಕ್ರವರ್ತಿ' ಎಲ್ಲೆಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲೆಲ್ಲಿ ಟಿಕೆಟ್ ಬುಕ್ ಮಾಡಬಹುದು ಅಂತ ಮುಂದೆ ಓದಿ

ಯಾವ ಯಾವ ಚಿತ್ರಮಂದಿರ!

'ಬುಕ್ ಮೈ ಶೋ'ನಲ್ಲಿ ಬುಕ್ ಮಾಡಿ

'ಬುಕ್ ಮೈ ಶೋ' ವೆಬ್ ತಾಣದಲ್ಲಿ 'ಚಕ್ರವರ್ತಿ' ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಈಗಾಗಲೇ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಗಳು ಜಾಮೂನಿನಂತೆ ಸೇಲ್ ಆಗ್ತಿದೆ.

ಯಾವ ಯಾವ ಚಿತ್ರಮಂದಿರ!

ಎಸ್.ಪಿ.ರಸ್ತೆಯ 'ಶಾರದ', ಉತ್ತರಳ್ಳಿಯ 'ವೈಷ್ಣವಿ', ಕಾಮಿಕ್ಷಿಪಾಳ್ಯದ 'ವಿಶಾಲ್', ಉಳ್ಳಾಲದ 'ವಜ್ರೇಶ್ವರಿ', ಕೆಂಗೇರಿಯ 'ಶ್ರೀವೆಂಕಟೇಶ್ವರ', ನಾಗವಾರದ 'ಪೃಥ್ವಿ', ಚಿಕ್ಕ ಬಾಣಾವರದ 'ಅಶೋಕ' ಚಿತ್ರಗಳು ಸೇರಿದಂತೆ ಕೆಲವು ಥಿಯೇಟರ್ ನಲ್ಲಿ ಮಾತ್ರ 'ಚಕ್ರವರ್ತಿ' ಚಿತ್ರದ ಬುಕ್ಕಿಂಗ್ ಓಪನ್ ಆಗಿದೆ.

'ಮಾಲ್'ನಲ್ಲಿ ಇನ್ನು ಅನೌನ್ಸ್ ಆಗಿಲ್ಲ!

ಸೋಲ್ಡ್ ಔಟ್ ಆಗುತ್ತಿದೆ!

ಟಿಕೇಟ್ ಬುಕ್ಕಿಂಗ್ ಓಪನ್ ಆಗುತ್ತಿದ್ದಂತೆ ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಟ್ ಔಟ್ ಆಗುತ್ತಿದೆ. ಚಿತ್ರಪ್ರೇಮಿಗಳು ತಾ ಮುಂದು ನಾ ಮುಂದು ಅಂತ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ.

ಏಪ್ರಿಲ್ 14ಕ್ಕೆ 'ಚಕ್ರವರ್ತಿ' ಅಬ್ಬರ

'ಚಕ್ರವರ್ತಿ' ಇದೇ ತಿಂಗಳು 14ರಂದು ರಾಜ್ಯಾದ್ಯಂತ ದಾಖಲೆಯ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನ ಸಿದ್ದಾಂತ್ ನಿರ್ಮಾಣ ಮಾಡಿದ್ದಾರೆ. ದರ್ಶನ್, ದಿನಕರ್ ತೂಗುದೀಪ, ಸೃಜನ್ ಲೋಕೇಶ್, ಕುಮಾರ್ ಬಂಗಾರಪ್ಪ, ಚಾರುಲತಾ, ದೀಪಾ ಸನ್ನಿಧಿ, ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

 


   darshan, dinakar toogudeepa, deepa sannidhi, aditya, charulatha, sandalwood, ದರ್ಶನ್, ದಿನಕರ್ ತೂಗುದೀಪ, ದೀಪಾ ಸನ್ನಿಧಿ, ಆದಿತ್ಯ, ಚಾರುಲತಾ, ಸ್ಯಾಂಡಲ್ ವುಡ್