ಸುಪ್ರೀಂ ಕೋರ್ಟ್ ನಲ್ಲಿ ಲ್ಯಾಂಡ್ ಮಾರ್ಕ್ ಆದ ಜಗ್ಗೇಶ್-ಪರಿಮಳ ಪ್ರೇಮ ಪ್ರಕರಣದ ತೀರ್ಪು

Header Banner

ಸುಪ್ರೀಂ ಕೋರ್ಟ್ ನಲ್ಲಿ ಲ್ಯಾಂಡ್ ಮಾರ್ಕ್ ಆದ ಜಗ್ಗೇಶ್-ಪರಿಮಳ ಪ್ರೇಮ ಪ್ರಕರಣದ ತೀರ್ಪು

  Fri Apr 07, 2017 10:02        Entertainment, Kannada

ನಟ ಜಗ್ಗೇಶ್ ಹಾಗೂ ಪರಿಮಳ ರವರ ಪ್ರೇಮ ಪುರಾಣ ಯಾವ ರೋಚಕ ಸಿನಿಮಾ ಕಥೆಗಿಂತಲೂ ಕಮ್ಮಿ ಇಲ್ಲ. ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಆದ ಈ ಜೋಡಿ ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್ ಮೆಟ್ಟಿಲೇರಬೇಕಾಯ್ತು

ಪೋಷಕರ ಕಣ್ತಪ್ಪಿಸಿ ಪರಿಮಳ ರನ್ನ ಮದುವೆ ಆದ ನಟ ಜಗ್ಗೇಶ್ ಮೇಲೆ 'ಕಿಡ್ನ್ಯಾಪ್' ಕೇಸ್ ಹಾಕಲಾಗಿತ್ತು. ಆಗಿನ್ನೂ ಪರಿಮಳಗೆ ಜಸ್ಟ್ 17 ವರ್ಷ. ಹೀಗಾಗಿ ಜಗ್ಗೇಶ್ ನೆತ್ತಿಯ ಮೇಲೆ ಜೈಲು ಶಿಕ್ಷೆಯ ತೂಗುಗತ್ತಿ ನೇತಾಡುತ್ತಿತ್ತು.

ಸುಪ್ರೀಂ ಕೋರ್ಟ್ ವರೆಗೂ ಹೋದ ಈ ಕೇಸ್ ನ ತೀರ್ಪಿನಲ್ಲಿ ಕೊಂಚ ಹೆಚ್ಚು ಕಮ್ಮಿ ಆಗಿದ್ರೂ, ಹತ್ತು ವರ್ಷಗಳ ಕಾಲ ಜೈಲಿನಲ್ಲಿ ಕೂತು ಜಗ್ಗೇಶ್ ಮುದ್ದೆ ಮುರಿಯಬೇಕಿತ್ತು.

ಆದ್ರೆ, ಮಾನವೀಯತೆಯ ಆಧಾರದ ಮೇಲೆ.. ಜಗ್ಗೇಶ್-ಪರಿಮಳ ಪ್ರೇಮಕ್ಕೆ ಬೆಲೆಕೊಟ್ಟು... ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸಂವಿಧಾನದ ವಿರುದ್ಧ ಹೋಗಿ ಪ್ರೇಮಿಗಳ ಪರ ತೀರ್ಪು ಕೊಟ್ಟರು. ಇದು ಸುಪ್ರೀಂ ಕೋರ್ಟ್ ನಲ್ಲಿಯೇ ಲ್ಯಾಂಡ್ ಮಾರ್ಕ್ ಆದ ತೀರ್ಪು. ಈ ಕುರಿತು 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಜಗ್ಗೇಶ್ ಮತ್ತು ಪರಿಮಳ ಏನು ಹೇಳಿದ್ರು ಅಂತ ಅವರ ಮಾತುಗಳಲ್ಲೇ ಓದಿರಿ

ಪರಿಮಳಗೆ 14... ಜಗ್ಗೇಶ್ ಗೆ 19...

''ನಾನು ನಿಮ್ಮ ಮೊದಲು ಮೀಟ್ ಮಾಡಿದಾಗ ನನ್ನ ವಯಸ್ಸು 14, ನಿಮ್ಮ ವಯಸ್ಸು 19. ನಾನು ಒಂಬತ್ತನೇ ಕ್ಲಾಸ್. ನೀವು ಫಸ್ಟ್ ಇಯರ್ ಡಿಗ್ರಿ ಓದುತ್ತಿದ್ರಿ. ಆಗಲೇ ಲವ್ ಲೆಟರ್ ಬರೆದಿದ್ರಿ. 22 ಮಾರ್ಚ್ 84, ಎಕ್ಸಾಂ ಅದ ಕೂಡಲೆ ರಿಜಿಸ್ಟರ್ ಮದುವೆ ಆದ್ವಿ. ಆಗ ನಿಮ್ಮ ಹತ್ತಿರ ದುಡ್ಡು ಇರಲಿಲ್ಲ'' - ಪರಿಮಳ, ಜಗ್ಗೇಶ್ ಪತ್ನಿ

ಮದುವೆಗೆ ಎಷ್ಟು ಜನ ಬಂದಿದ್ರು.?

''ನಮ್ಮ ಮದುವೆಗೆ ಮೂರು ಜನ ಫ್ರೆಂಡ್ಸ್, ಪೂಜಾರಿ ಮತ್ತು ಅವರ ಪತ್ನಿ. ಐದು ಜನ. ಎರಡು ಪ್ಲೇಟ್ ಪಕೋಡ ಮತ್ತು ಎರಡು ಪ್ಲೇಟ್ ಪೂರಿ ತರಿಸಿ ಹಂಚಿಕೊಂಡು ತಿಂದ್ವಿ. ಅದರ ಜೊತೆ ಮೈಸೂರು ಪಾಕ್ ಸ್ವೀಟ್. ನಮ್ಮ ಮದುವೆಗೆ ಊಟ ಇಷ್ಟೇ'' - ಜಗ್ಗೇಶ್, ನಟ

ಕ್ಲಾಸ್ ಮೇಟ್ ನಿಂದ ಸಮಸ್ಯೆ ಆಗಿದ್ದು.!

''ಸುಪ್ರೀಂ ಕೋರ್ಟ್ ನಲ್ಲಿ ನಿರ್ಧಾರ ಆದ ಕೇಸ್ ನಮ್ಮದು. 22 ಮಾರ್ಚ್ 84 ರಂದು ಮದುವೆ ಆದ್ವಿ. ಮಾರನೇ ದಿನ ನನ್ನ ಕ್ಲಾಸ್ ಮೇಟ್ ಫಿಟ್ಟಿಂಗ್ ಇಟ್ಟ. ಪರಿಮಳ ಅಪ್ಪ ಬಂದು, ಆಕೆಗೆ ಹೊಡೆದು ಮದ್ರಾಸ್ ಗೆ ಕರ್ಕೊಂಡು ಹೋದರು'' - ಜಗ್ಗೇಶ್, ನಟ

ಪ್ರೇಮ ಸಂದೇಶ

''ಮದ್ರಾಸ್ ನಲ್ಲಿ ಬಹಳ ಸೆಕ್ಯೂರಿಟಿ ಇಟ್ಟು ಕಾಲೇಜ್ ಗೆ ಸೇರಿಸಿದ್ದರು. ನಮಗೆ ಸಂಪರ್ಕ ಇರಲಿಲ್ಲ. ನನ್ನ ಮನಸ್ಸಲ್ಲಿ ಇದ್ದ ಭಾವನೆಗಳನ್ನೆಲ್ಲ ಲೆಟರ್ ನಲ್ಲಿ ಬರೆದು ಇಟ್ಟಿದ್ದೆ. ಆ ಲೆಟರ್ ಗಳನ್ನೆಲ್ಲ ಪರಿಮಳಗೆ ತಲುಪಿಸಿದ್ದು ಕೋಮಲ್'' - ಜಗ್ಗೇಶ್, ನಟ

ಪೊಲೀಸ್ ಕಂಪ್ಲೇಂಟ್ ಆಯ್ತು

''ಆ ಎಲ್ಲ ಪತ್ರಗಳನ್ನ ಓದಿ ಪರಿಮಳ ನನಗೆ ರಿಪ್ಲೈ ಬರೆದಳು. ಅದಾದ್ಮೇಲೆ ನಿರ್ಧಾರ ಮಾಡಿ ಮದ್ರಾಸ್ ನಿಂದ ಪರಿಮಳನ ಕರ್ಕೊಂಡು ಬಂದುಬಿಟ್ಟೆ. ಆಮೇಲೆ ಪೊಲೀಸ್ ಕಂಪ್ಲೇಂಟ್ ಆಯ್ತು'' - ಜಗ್ಗೇಶ್, ನಟ

ಕಿಡ್ನ್ಯಾಪ್ ಕೇಸ್ ಫೈಲ್ ಆಯ್ತು

''ಪೊಲೀಸ್ ಬಂದು ನನ್ನ ಹಿಡಿದುಕೊಂಡು ಹೋಗಿ, ಚೆನ್ನಾಗಿ ವರ್ಕ್ ಮಾಡಿದರು. ಕಿಡ್ನ್ಯಾಪ್ ಕೇಸ್ ಫೈಲ್ ಮಾಡಿದರು. ಅದು ಸುಪ್ರೀಂ ಕೋರ್ಟ್ ವರೆಗೂ ಹೋಯ್ತು'' - ಜಗ್ಗೇಶ್, ನಟ

ರಾಯರ ಸ್ಥಾನದಲ್ಲಿ ಕಂಡರು ಮುಖ್ಯ ನ್ಯಾಯಮೂರ್ತಿಗಳು

''ನನಗೆ ಆಗ 17 ವರ್ಷ. ಮದುವೆ ಆಗಿ ಒಂದುವರೆ ವರ್ಷ ಆಗಿತ್ತು. ನಮ್ಮ ವಯಸ್ಸು ಚಿಕ್ಕದಿದ್ದರೂ, ನಮ್ಮ ಯೋಚನೆ ಮಾತ್ರ ಚಿಕ್ಕದಾಗಿರಲಿಲ್ಲ. ಹೀಗಾಗಿ ತೀರ್ಪು ನಮ್ಮ ಪರ ಆಯ್ತು. ಅದು ಗುರುವಾರ... ರಾಯರ ಸ್ಥಾನದಲ್ಲಿ ನಿಂತು ಮುಖ್ಯ ನ್ಯಾಯಮೂರ್ತಿ ಜಗ್ಗೇಶ್ ಪರ ಮಾತನಾಡಿದರು. ಸಂವಿಧಾನದ ವಿರುದ್ಧ ಹೋಗಿ ನಮ್ಮ ಪರ ತೀರ್ಪು ಬಂತು. ಅದು ಲ್ಯಾಂಡ್ ಮಾರ್ಕ್ ಜಡ್ಜ್ ಮೆಂಟ್'' - ಪರಿಮಳ, ಜಗ್ಗೇಶ್ ಪತ್ನಿ


   weekend with ramesh 3, jaggesh, ramesh aravind, zee kannada, tv, reality show, weekend with ramesh, ವೀಕೆಂಡ್ ವಿತ್ ರಮೇಶ್ 3, ಜಗ್ಗೇಶ್, ರಮೇಶ್ ಅರವಿಂದ್, ಜೀ ಕನ್ನಡ, ಟಿವಿ, ರಿಯಾಲಿಟಿ ಶೋ