ಮೈಸೂರ್ ಪಾಕ್

Header Banner

ಮೈಸೂರ್ ಪಾಕ್

  Tue Feb 21, 2017 15:41        Kannada, Recipes

ಬೇಕಾಗುವ ಪದಾರ್ಥಗಳು...
ಕಡಲೆ ಹಿಟ್ಟು - 1 ಬಟ್ಟಲು
ಸಕ್ಕರೆ - 2 ಬಟ್ಟಲು
ತುಪ್ಪ - 1.1/2 ಬಟ್ಟಲು
ಮಾಡುವ ವಿಧಾನ...
ಮೊದಲು ಒಲೆಯ ಮೇಲೆ ಪಾತ್ರೆಯಿಟ್ಟು ನೀರನ್ನು ಬಿಸಿ ಮಾಡಿಕೊಳ್ಳಬೇಕು. ನಂತರ ಸಕ್ಕರೆಯನ್ನು ಹಾಕಬೇಕು.
ಸಕ್ಕರೆ ಕರಗಿದ ಬಳಿಕ ಸ್ವಲ್ಪ ಕಡಲೆಹಿಟ್ಟುನ್ನು ಸ್ವಲ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಸ್ವಲ್ಪ ತುಪ್ಪವನ್ನು ಹಾಗಿ ಚೆನ್ನಾಗಿ ಕೈಯಾಡಿಸಬೇಕು. ಹೀಗೆಯೇ ಸ್ವಲ್ಪ ಕಡಲೆಹಿಟ್ಟು ಸ್ವಲ್ಪ ತುಪ್ಪ ಹಾಕಿ ಗಂಟಾಗದಂತೆ ಚೆನ್ನಾಗಿ ತಿರುವುತ್ತಿರಬೇಕು.
ತಳಹಿಡಿಯದಂತೆಯೇ 10-15 ನಿಮಿಷ ಒಲೆಯ ಮೇಲಿಟ್ಟು ಇಳಿಸಬೇಕು.
ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಸವರಿ, ತಯಾರಾದ ಮೈಸೂರ್ ಪಾಕನ್ನು ಹಾಕಿ ತಣ್ಣಗಾಗಲು ಬಿಡಬೇಕು.
1 ಗಂಟೆ ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರವಾದ ಹಾಗೂ ವಿಶೇಷವಾದ ಮೈಸೂರ್ ಪಾಕ್ ಸವಿಯಲು ಸಿದ್ಧ.   Recipe, Mysore Pak, Cooking, Veg, ಪಾಕ ವಿಧಾನ, ಮೈಸೂರ್ ಪಾಕ್, ಅಡುಗೆ, ಸಸ್ಯಾಹಾರ, how to make mysore pak, mysore pak making, recipe Mysore Pak,ingredients for Mysore Pak