ಮಕ್ಕಳಲ್ಲಿ ನಿಯಮಿತ ನಿದ್ದೆಯಿಂದ ಉತ್ತಮವಾಗಿ ಭಾಷೆ ಕಲಿಕೆಗೆ ಸಹಾಯ: ಸಂಶೋಧನೆ

Header Banner

ಮಕ್ಕಳಲ್ಲಿ ನಿಯಮಿತ ನಿದ್ದೆಯಿಂದ ಉತ್ತಮವಾಗಿ ಭಾಷೆ ಕಲಿಕೆಗೆ ಸಹಾಯ: ಸಂಶೋಧನೆ

  Tue Feb 21, 2017 15:06        Kannada, Life Style

ನ್ಯೂಯಾರ್ಕ್: ಪ್ರತಿನಿತ್ಯ ಹಗಲು ಹೊತ್ತಿನಲ್ಲಿ ಅಲ್ಪ ನಿದ್ರೆ ಮಾಡುವ ಮಕ್ಕಳು ನಿದ್ದೆ ಮಾಡದಿರುವ ಮಕ್ಕಳಿಗಿಂತ ಬೇಗನೆ ಉತ್ತಮ ಭಾಷೆ ಕೌಶಲಗಳನ್ನು ಬೆಳೆಸಿಕೊಳ್ಳುತ್ತವೆ, ಆರೋಗ್ಯಯುತವಾಗಿರುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.
ಮೂರು ವರ್ಷದೊಳಗಿನ ಮಕ್ಕಳು ಹಗಲು ಹೊತ್ತಿನಲ್ಲಿ ನಿದ್ದೆ ಮಾಡುತ್ತಿದ್ದರೆ ಅವರು ನಿದ್ದೆ ಮಾಡದಿರುವ ಮಕ್ಕಳಿಗಿಂತ ಚೆನ್ನಾಗಿ ಆರೋಗ್ಯವಾಗಿರುತ್ತಾರೆ ಮತ್ತು ಬೇಗನೆ ಭಾಷೆಗಳನ್ನು ಕಲಿಯುತ್ತಾರೆ.
ಆಗತಾನೆ ಹುಟ್ಟಿದಲ್ಲಿಂದ 6 ತಿಂಗಳ ಮಗು ದಿನದಲ್ಲಿ 5-6 ಬಾರಿ ಅಲ್ಪ ನಿದ್ದೆ ಮಾಡಬಹುದು. ಮೂರು ವರ್ಷಕ್ಕಿಂತ ಕೆಳಗಿನ ಮಕ್ಕಳು ದಿನದಲ್ಲಿ ಒಂದೆರಡು ಸಲ ಸ್ವಲ್ಪ ಹೊತ್ತು ನಿದ್ದೆ ಮಾಡಬಹುದು. ನಿಧಾನ ತರಂಗ ನಿದ್ರೆಯಿಂದ ಮಕ್ಕಳ ಕಲಿಕೆ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎನ್ನುತ್ತಾರೆ ಸಂಶೋಧಕರು.
ಮಕ್ಕಳ ಸ್ಮರಣೆಶಕ್ತಿ ಮೇಲೆ ಕೂಡ ನಿದ್ದೆಯ ವಿವಿಧ ಹಂತಗಳು ಸಹಾಯ ಮಾಡುತ್ತವೆ. ಮಕ್ಕಳು ಆಳವಾದ ನಿದ್ರೆಗೆ ಜಾರಿದರೆ ಕೂಡ ಅದು ಅವರ ಆರೋಗ್ಯಕ್ಕೆ ಉಪಕಾರಿ ಎನ್ನುತ್ತಾರೆ ಅಮೆರಿಕಾದ ಅರಿಜೋನಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರೆಬೆಕ್ಕಾ ಗೊಮೆಝ್.
ಮಕ್ಕಳು ನಿದ್ದೆ ಮಾಡುತ್ತಿರುವಾಗ ನೆನಪುಗಳನ್ನು ಮತ್ತೆ ತರುತ್ತದೆ. ಇದು ನಿಧಾನ ತರಂದ ನಿದ್ರೆಯಲ್ಲಿ ನಡೆಯುತ್ತದೆ ಎಂದು ಚೈಲ್ಡ್ ಡೆವಲಪ್ ಮೆಂಟ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.
ಶಾಲಾಪೂರ್ವ ಅಂದರೆ 5 ವರ್ಷದವರೆಗಿನ ಮಕ್ಕಳಿಗೆ ದಿನದಲ್ಲಿ 10ರಿಂದ 12 ಗಂಟೆಗಳ ಕಾಲ ನಿದ್ದೆ ಅಗತ್ಯ. ಅದು ರಾತ್ರಿ ಹೊತ್ತಿನಲ್ಲಾಗಿರಬಹುದು ಅಥವಾ ಹಗಲು ಹೊತ್ತಿನಲ್ಲಿ ಅಲ್ಪ ನಿದ್ದೆ ಮಾಡಿ ನಂತರ ರಾತ್ರಿ ವೇಳೆ ದೀರ್ಘಾವಧಿಯವರೆಗೆ ಮಾಡಲೂ ಬಹುದು.
ಮಕ್ಕಳು ಸರಿಯಾಗಿ ಪ್ರತಿನಿತ್ಯ ನಿದ್ದೆ ಮಾಡದಿದ್ದರೆ ದೀರ್ಘಾವಧಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಅರಿವಿನ ಪರೀಕ್ಷೆಗಳಲ್ಲಿ ಕೊರತೆಗಳುಂಟಾಗಬಹುದು ಎಂದು ಗೊಮೆಝ್ ಹೇಳುತ್ತಾರೆ.
ಈ ಅಧ್ಯಯನಕ್ಕೆ ಅವರ ತಂಡ 3 ವರ್ಷದ 39 ಮಕ್ಕಳನ್ನು ಪರೀಕ್ಷೆ ಮಾಡಿದ್ದು ಅವರನ್ನು ಎರಡು ಗುಂಪುಗಳನ್ನಾಗಿ ಮಾಡಿದರು. ಮೊದಲನೆಯದು ದಿನಂಪ್ರತಿ ನಿದ್ದೆ ಮಾಡುವ ಮತ್ತು ದಿನಂಪ್ರತಿ ನಿದ್ದೆ ಮಾಡದಿರುವ ಮಕ್ಕಳು.
ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ದಿನಂಪ್ರತಿ ಹಗಲು ಹೊತ್ತಿನಲ್ಲಿ ಅತ್ಯಲ್ಪ ನಿದ್ದೆ ಮಾಡಿಸುವ ರೂಢಿ ಮಾಡಿಕೊಂಡರೆ ಉತ್ತಮ ಎನ್ನುತ್ತಾರೆ ಸಂಶೋಧಕರು.   Toddler, Children, Nap, Research, ಮಗು, ಮಕ್ಕಳು, ನಿದ್ದೆ, ಸಂಶೋಧನೆ,language skills, take a nap, habitual nappers