ಕಲ್ಮಿ ವಡೆ

Header Banner

ಕಲ್ಮಿ ವಡೆ

  Sat Feb 11, 2017 16:02        Kannada, Recipes

ಬೇಕಾಗುವ ಪದಾರ್ಥಗಳು...

 • ಕಡಲೆಬೇಳೆ - ನೆನೆಸಿದ್ದು 1 ಬಟ್ಟಲು

 • ಹಸಿಮೆಣಸಿನ ಕಾಯಿ - 4

 • ಅಚ್ಚ ಖಾರದ ಪುಡಿ - ಅರ್ಧ ಚಮಚ

 • ಜೀರಿಗೆ - ಅರ್ಧ ಚಮಚ

 • ಉಪ್ಪು - ರುಚಿಗೆ ತಕ್ಕಷ್ಟು

 • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 2 ಚಮಚ

 • ಕರಿಬೇವು - ಕತ್ತರಿಸಿದ್ದು ಸ್ವಲ್ಪ

 • ಕೊತ್ತಂಬರಿ ಸೊಪ್ಪು - ಸ್ವಲ್ಪ

 • ಎಣ್ಣೆ - ಕರಿಯಲು

ಮಾಡುವ ವಿಧಾನ... 

 • ಮೊದಲು ಕಡಲೆಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು.

 • ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ, ಖಾರದ ಪುಡಿ, ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಕರಿಬೇವು, ಜೀರಿಗೆ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

 • ನಂತರ ಬಾಣಲೆಗೆ ಎಣ್ಣೆ ಹಾಕಿ. ಅದು ಕಾದ ನಂತರ ಮಸಾಲಾ ಮಿಶ್ರಣವನ್ನು ವಡೆಯಂತೆ ತಟ್ಟಿ 2-3 ನಿಮಿಷಗಳ ಕಾಲ ಬೇಯಿಸಿ ತೆಗೆಯಬೇಕು. ನಂತರ ಅದು ತಣ್ಣಗಾಗಲು ಬಿಟ್ಟು, ಒಂದು ವಡೆಯಲ್ಲಿ ಮೂರು ಭಾಗದಂತೆ ಉದ್ದವಾಗಿ ಕತ್ತರಿಸಿಟ್ಟುಕೊಳ್ಳಬೇಕು.

 • ಕತ್ತರಿಸಿದ ವಡೆಯನ್ನು ಮತ್ತೊಮ್ಮೆ ಕಾದ ಎಣ್ಣೆಗೆ ಹಾಕಿ ಕೆಂಪಗಾಗುವಂತೆ ಕರಿದರೆ ರುಚಿಕರವಾಗ ಕಲ್ಮಿ ವಡೆ ಸವಿಯಲು ಸಿದ್ಧ.

 


   Recipe, Kalmi Vada, Cooking, Veg, ಪಾಕ ವಿಧಾನ, ಕಲ್ಮಿ ವಡೆ, ಅಡುಗೆ, ಸಸ್ಯಾಹಾರ, how to make kalmi vada