ದೂದ್ ಪೇಡಾ

Header Banner

ದೂದ್ ಪೇಡಾ

  Fri Feb 03, 2017 16:23        Kannada, Recipes

ಬೇಕಾಗುವ ಪದಾರ್ಥಗಳು 

  • ಖೋವಾ - 2 ಬಟ್ಟಲು

  • ಸಕ್ಕರೆ ಪುಡಿ - ಅರ್ಧ ಬಟ್ಟಲು

  • ಹಾಲು - 1 ಬಟ್ಟಲು

  • ಏಲಕ್ಕಿ ಪುಡಿ - ಅರ್ಧ ಚಮಚ

  • ತುಪ್ಪ - ಅರ್ಧ ಬಟ್ಟಲು

  • ಪಿಸ್ತಾ - ಸ್ವಲ್ಪ 

ಮಾಡುವ ವಿಧಾನ.... 

  • ಮೊದಲು ಪ್ಯಾನ್ ತೆಗೆದುಕೊಂಡು ಅದಕ್ಕೆ ಖೋವಾ ಹಾಕಿ ಬಿಸಿ ಮಾಡಿಕೊಳ್ಳಬೇಕು.

  • 5 ನಿಮಿಷಗಳ ಕಾಲ ಖೋವಾವನ್ನು ಹುರಿದುಕೊಳ್ಳಬೇಕು. ನಂತರ ತುಪ್ಪ ಹಾಕಿ ಕೈಯಾಡಿಸುತ್ತಲೇ ಇರಬೇಕು.

  • ತುಪ್ಪ ಮತ್ತು ಖೋವಾ ಎರಡೂ ಚೆನ್ನಾಗಿ ಮಿಶ್ರಣಗೊಂಡ ಬಳಿಕ ಇದಕ್ಕೆ ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

  • ಮಿಶ್ರಣವಾಗಿ ತಳ ಬಿಡುತ್ತಿದ್ದಂತೆಯೇ ಹಾಲು ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 2 ನಿಮಿಷ ಒಲೆಯ ಮೇಲೆ ಬಿಡಬೇಕು. ತಟ್ಟೆಯೊಂದಕ್ಕೆ ತುಪ್ಪ ಸವರಿ ಅದಕ್ಕೆ ಈ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಬೇಕು. ನಂತರ ಪೇಡಾ ಆಕಾರಕ್ಕೆ ಕತ್ತರಿಸಿ ಪಿಸ್ತಾದಿಂದ ಅಲಂಕರಿಸಿದರೆ ರುಚಿಕರವಾದ ದೂದ್ ಪೇಡಾ ಸವಿಯಲು ಸಿದ್ಧ.

 


   Recipe, Doodh peda, Cooking, Veg, ಪಾಕ ವಿಧಾನ, ದೂದ್ ಪೇಡಾ, ಅಡುಗೆ, ಸಸ್ಯಾಹಾರ