ಫ್ರೆಂಚ್ ಫ್ರೈಸ್

Header Banner

ಫ್ರೆಂಚ್ ಫ್ರೈಸ್

  Mon Jan 23, 2017 15:25        Kannada, Recipes

ಬೇಕಾಗುವ ಪದಾರ್ಥಗಳು... 

 • ಆಲೂಗಡ್ಡೆ - ದೊಡ್ಡ ಗಾತ್ರದ್ದು 2

 • ಉಪ್ಪು- ರುಚಿಗೆ ತಕ್ಕಷ್ಟು

 • ವಿನೆಗರ್ - 2 ಚಮಚ

 • ಕೋಲ್ಡ್ ವಾಟರ್ - ಒಂದು ಬಟ್ಟಲು

 • ಎಣ್ಣೆ - ಕರಿಯಲು

ಮಾಡುವ ವಿಧಾನ... 

 • ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದುಕೊಂಡು ಉದ್ದವಾಗಿ ಫ್ರೆಂಚ್ ಫ್ರೈಸ್ ಆಕಾರದಲ್ಲಿ ಕತ್ತರಿಸಿಕೊಳ್ಳಬೇಕು.

 • ನಂತರ ಕೋಲ್ಡ್ ವಾಟರ್ ತೆಗೆದುಕೊಂಡು 1-2 ಗಂಟೆಗಳ ಕಾಲ ನೆನೆ ಹಾಕಬೇಕು.

 • ನಂತರ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ 2 ಚಮಚ ಉಪ್ಪು ಹಾಗೂ ವಿನೇಗರ್ ಹಾಕಿ 7-10 ನಿಮಿಷಗಳ ಕಾಲ ನೆನೆಸಬೇಕು.

 • ನಂತರ ನೆನೆದ ಆಲೂ ಪೀಸ್ ಗಳನ್ನು ತೆಗೆದು ಕಾಟನ್ ಬಟ್ಟೆಗೆ ಹಕಿ ಚೆನ್ನಾಗಿ ಒತ್ತಬೇಕು.

 • ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು ಕಾಯಲು ಬಿಡಬೇಕು. ನಂತರ ಆಲೂಪೀಸ್ ಗಳನ್ನು ಹಾಕಿ 3-4 ನಿಮಿಷ ಕರಿದು ತೆಗೆದು ಬಿಡಬೇಕು.

 • ಅದು ತಣ್ಣಗಾದ ನಂತರ ಮತ್ತೆ ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಟೊಮೆಟೋ ಸಾಸ್ ನೊಂದಿಗೆ ತಿಂದರೆ ಫ್ರೆಂಚ್ ಫ್ರೈಸ್ ನ ರುಚಿ ಮತ್ತಷ್ಟು ಹೆಚ್ಚುತ್ತದೆ.

 


   Recipe, French fries, Cooking, Veg, ಪಾಕ ವಿಧಾನ, ಫ್ರೆಂಚ್ ಫ್ರೈಸ್, ಅಡುಗೆ, ಸಸ್ಯಾಹಾರ