ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯರಿಗೆ 6 ಸೀಟ್ ಮೀಸಲು

Header Banner

ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯರಿಗೆ 6 ಸೀಟ್ ಮೀಸಲು

  Thu Jan 12, 2017 16:27        Business, Kannada

ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನ ತನ್ನ ದೇಶಿ ಹಾರಾಟದಲ್ಲಿ ಮಹಿಳೆಯರಿಗೆ ಆರು ಸೀಟ್ ಮೀಸಲಿಡಲು ನಿರ್ಧರಿಸಿದೆ.
ಏರ್ ಇಂಡಿಯಾ ವಿಮಾನದ ಈ ಹೊಸ ನಿಯಮ ಜನವರಿ 18ರಿಂದ ಜಾರಿಗೆ ಬರುತ್ತಿದ್ದು, ಎಕೊನೊಮಿ ಕ್ಲಾಸ್ ನ ಮೊದಲ ಸಾಲಿನಲ್ಲಿ ಮಹಿಳೆಯರಿಗೆ ಆರು ಸ್ಥಾನ ಮೀಸಲಿಡಲಾಗುತ್ತಿದ್ದು, ವಿಶೇಷವಾಗಿ ಒಂಟಿಯಾಗಿ ಪ್ರಯಾಣ ಮಾಡುವ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಇದಕ್ಕಾಗಿ ಹೆಚ್ಚಿನ ದರ ನೀಡಬೇಕಾಗಿಲ್ಲ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಇಂಡಿಯಾದ ಈ ನಿರ್ಧಾರದಿಂದಾಗಿ ಪ್ರಯಾಣದ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಕಿರುಕುಳಗಳಿಗೆ ಒಳಗಾಗುತ್ತಿದ್ದ ಮಹಿಳೆಯರಿಗೆ ಇದೊಂದು ರಿಲೀಫ್ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಸರ್ಕಾರಿ ಬಸ್, ರೈಲು ಹಾಗೂ ಮೆಟ್ರೊದಲ್ಲೂ ಇದೇ ರೀತಿ ಮಹಿಳೆಯರಿಗೆ ಕೆಲವು ಆಸನಗಳನ್ನು ಮೀಸಲಿಡಲಾಗಿದೆ. ಇದೀಗ ವಿಮಾನದಲ್ಲೂ ಮಹಿಳೆಯರಿಗೆ ಮೀಸಲಾತಿ ಜಾರಿಗೆ ಬರುತ್ತಿದೆ.   Air India, reserve six seats, women, ಏರ್ ಇಂಡಿಯಾ, ಆರು ಸೀಟ್ ಮೀಸಲು, ಮಹಿಳೆಯರು