ಸುಷ್ಮಾ ಸ್ವರಾಜ್ ಎಚ್ಚರಿಕೆ ಬೆನ್ನಲ್ಲೇ ತ್ರಿವರ್ಣ ಧ್ವಜದ ಮಾದರಿಯ ಡೋರ್ ಮ್ಯಾಟ್ ಅಮೇಜಾನ್ ನಿಂದ ಮಾಯ!

Header Banner

ಸುಷ್ಮಾ ಸ್ವರಾಜ್ ಎಚ್ಚರಿಕೆ ಬೆನ್ನಲ್ಲೇ ತ್ರಿವರ್ಣ ಧ್ವಜದ ಮಾದರಿಯ ಡೋರ್ ಮ್ಯಾಟ್ ಅಮೇಜಾನ್ ನಿಂದ ಮಾಯ!

  Thu Jan 12, 2017 16:25        Business, Kannada

ತ್ರಿವರ್ಣ ಧ್ವಜದ ಮಾದರಿಯ ಡೋರ್ ಮ್ಯಾಟ್ ಅಮೇಜಾನ್ ನಲ್ಲಿ ಮಾರಾಟಕ್ಕೆ ಇಟ್ಟಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅಮೇಜಾನ್ ಗೆ ಕಠಿಣ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆಯಿಂದ ಎಚ್ಚೆತ್ತಿರುವ ಇ-ಕಾಮರ್ಸ್ ವೆಬ್ ಸೈಟ್ ಅಮೇಜಾನ್ ತ್ರಿವರ್ಣ ಧ್ವಜ ಮಾದರಿಯಲ್ಲಿ ತಯಾರಾಗಿದ್ದ ಡೋರ್ ಮ್ಯಾಟ್ ಉತ್ಪನ್ನಗಳನ್ನು ಮಾರಾಟದ ಪಟ್ಟಿಯಿಂದೆ ತೆಗೆದುಹಾಕಿದೆ. 

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಮೇಜಾನ್ ನ ವಕ್ತಾರ, ಇನ್ನು ಮುಂದೆ ತ್ರಿವರ್ಣ ಧ್ವಜ ಮಾದರಿಯಲ್ಲಿ ತಯಾರಾಗಿರುವ ಡೋರ್ ಮ್ಯಾಟ್ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿಲ್ಲ ಎಂದು ಹೇಳಿದ್ದಾರೆ. ತ್ರಿವರ್ಣ ಧ್ವಜದ ಮಾದರಿಯಲ್ಲಿ ಡೋರ್ ಮ್ಯಾಟ್ ನ್ನು ತಯಾರಿಸಿದ ಉತ್ಪನ್ನವನ್ನು ಅಮೇಜಾನ್ ಸಂಸ್ಥೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ಉತ್ಪನ್ನದ ಮಾರಾಟವನ್ನು ತಕ್ಷಣವೇ ನಿಲ್ಲಿಸದಿದ್ದರೆ ಅಮೇಜಾನ್ ನ ಯಾವುದೇ ನೌಕರರಿಗೆ ವೀಸಾ ನಿರಾಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಈಗ ಮಾಡಿರುವ ತಪ್ಪಿಗೆ ಅಮೇಜಾನ್ ಕ್ಷಮೆ ಯಾಚಿಸಬೇಕೆಂದೂ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು.
ಸುಷ್ಮಾ ಸ್ವರಾಜ್ ಅವರ ಟ್ವೀಟ್ ನಿಂದ ಎಚ್ಚೆತ್ತುಕೊಂಡಿರುವ ಅಮೇಜಾನ್ ಡೋರ್ ಮ್ಯಾಟ್ ಉತ್ಪನ್ನಗಳನ್ನು ತೆಗೆದುಹಾಕಿದೆ.   Amazon, Indian flag-themed doormat, Sushma Swaraj, Tweet, ಅಮೇಜಾನ್, ತ್ರಿವರ್ಣ ಧ್ವಜ, ಡೋರ್ ಮ್ಯಾಟ್, ಸುಷ್ಮಾ ಸ್ವರಾಜ್