"ಸುಳ್ಳು ಸುದ್ದಿ" ತಡೆಯಲು ಫೇಸ್ ಬುಕ್ ನಿಂದ "ಜರ್ನಲಿಸಮ್ ಪ್ರಾಜೆಕ್ಟ್"!

Header Banner

"ಸುಳ್ಳು ಸುದ್ದಿ" ತಡೆಯಲು ಫೇಸ್ ಬುಕ್ ನಿಂದ "ಜರ್ನಲಿಸಮ್ ಪ್ರಾಜೆಕ್ಟ್"!

  Thu Jan 12, 2017 16:21        Kannada, Technology

ಸುದ್ದಿ ಸಂಸ್ಥೆಗಳ ನಡುವಿನ ಬಾಂಧವ್ಯ ವೃದ್ದಿಗಾಗಿ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ಪತ್ರಿಕೋಧ್ಯಮ ಯೋಜನೆ (ಜರ್ನಲಿಸಮ್ ಪ್ರಾಜೆಕ್ಟ್) ಅನ್ನು ಬಿಡುಗಡೆ ಮಾಡಿದ್ದು, ಇದು ವ್ಯಾಪಕವಾಗಿ ಹಬ್ಬುವ ಸುಳ್ಳು ಸುದ್ದಿಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ವಿಶ್ವದ ಅತೀ ದೊಡ್ಡ ಸಾಮಾಜಿಕ ಜಾಲತಾಣವಾಗಿರುವ ಫೇಸ್ ಬುಕ್ ತನ್ನ ಮೂಲಕ ಸುಳ್ಳು ಮಾಹಿತಿ ಹರಡುವುದನ್ನು ತಡೆಗಟ್ಟಲು ಪತ್ರಿಕೋದ್ಯಮ ಪ್ರಾಜೆಕ್ಟ್ ಅನ್ನು ಬಿಡುಗಡೆ ಮಾಡಿದ್ದು, ಜಾಲತಾಣ ಮಾಹಿತಿ ವಿನಿಮಯ ಕುರಿತು ಚರ್ಚಿಸುತ್ತದೆ. ಫೇಸ್ ಬುಕ್ ಹೇಳಿಕೊಂಡಿರುವಂತೆ ತನ್ನ ನೂತನ ಯೋಜನೆಯಲ್ಲಿ ಸುಳ್ಳು ಸುದ್ದಿಗಳನ್ನು ಕಂಡುಹಿಡಿಯಲು ಮತ್ತು ಅದನ್ನು ನ್ಯೂಸ್ ಫೀಡ್ ನಿಂದ ತೆಗೆದು ಹಾಕಲು ನೆರವಾಗಲಿದೆ ಎಂದು ಹೇಳಿಕೊಂಡಿದೆ.
ಫೇಸ್ ಬುಕ್ ಬಳಕೆದಾರರಿಗೆ ಪ್ರತಿನಿತ್ಯ ನೂರಾರು ಸುದ್ದಿಗಳು ಕಾಣಸಿಗುತ್ತವೆ. ಹೀಗೆ ಬರುವ ಬಹುತೇಕ ಸುದ್ದಿಗಳಲ್ಲಿ ಹಲವು ಸುದ್ದಿಗಳು ಸುಳ್ಳುಸುದ್ದಿಗಳಾಗಿರುತ್ತವೆ. ಇದು ಸುಳ್ಳು ಸುದ್ದಿ ಎಂದು ತಿಳಿದಾಗ ನಾವು ಸಾಮಾನ್ಯವಾಗಿ ಇದು ಸುಳ್ಳು ಸುದ್ದಿ ಎಂದು ಕಮೆಂಟ್ ಮಾಡಿ ಅಥವಾ ಅದನ್ನು ನಮ್ಮ ವಾಲ್ ನಿಂದ ಡಿಲೀಟ್ ಮಾಡುತ್ತೇವೆ. ಇಲ್ಲವಾದರೆ ಅದರ ಬಗ್ಗೆ ಗಮನವೇ ಕೊಡದೇ ಅದನ್ನು ನಿರ್ಲಕ್ಷಿಸಿ ಮುಂದಿನ ಸುದ್ದಿಗಳಿಗೆ ತೆರಳುತ್ತೇವೆ. ಕೆಲ ಖಾತೆದಾರರಿಗೆ ಇದು ಇರುಸು-ಮುರುಸು ತರುತ್ತದೆ. ಕೆಲವರು ಇದರ ಬಗ್ಗೆ ಚರ್ಚೆ ಮಾಡಿದರೆ ಮತ್ತೆ ಕೆಲವು ಸಮಯ ವ್ಯರ್ಥ ಎಂದು ಭಾವಿಸುತ್ತಾರೆ.
ಹೀಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ಉದ್ದೇಶದಿಂದಲೇ ಫೇಸ್ ಬುಕ್ ನೂತನ ಜರ್ನಲಿಸಂ ಪ್ರಾಜೆಕ್ಟ್ ಅನ್ನು ಜಾರಿಗೆ ತಂದಿದ್ದು, ಈ ನೂತನ ವ್ಯವಸ್ಥೆಯಲ್ಲಿ ಹೆಚ್ಚು ಖಾತೆದಾರರು ಒಂದು ಸುದ್ದಿಯನ್ನು ಸುಳ್ಳು ಸುದ್ದಿ ಎಂದು ನಿರ್ಧರಿಸಿದರೆ ಅದನ್ನು ಸುಳ್ಳು ಸುದ್ದಿ ಪಟ್ಟಿಗೆ ಸೇರಿಸಿ ಹೆಚ್ಚು ಪ್ರಚಾರವಾಗದಂತೆ ತಡೆಯಲಾಗುತ್ತದೆ. ಆ ಮೂಲಕ ಆ ಸುಳ್ಳು ಸುದ್ದಿ ಹೆಚ್ಚು ಜನ ಓದದಂತೆ ತಡೆಯುವ ವಿಶಿಷ್ಟ ಯೋಜನೆಯನ್ನು ಫೇಸ್ ಬುಕ್ ಜಾರಿ ತಂದಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಪ್ರಾಜೆಕ್ಟ್ ನಿರ್ದೇಶಕ ಫಿಡ್ಜಿ ಸಿಮೋ "ಆರೋಗ್ಯಕರ ಸ್ಪರ್ಧೆ ಏರ್ಪಡಲು ಹೊಸ ಕಾರ್ಯಕ್ರಮವನ್ನು ಪರಿಚಯಿಸುತ್ತಿದ್ದೇವೆ. ಇದಕ್ಕಾಗಿ ಸುದ್ದಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.   New Delhi, Science And Technology, Facebook, False news, ನವದೆಹಲಿ, ವಿಜ್ಞಾನ ಮತ್ತು ತಂತ್ರಜ್ಞಾನ, ಫೇಸ್ ಬುಕ್, ಸುಳ್ಳು ಸುದ್ದಿ