ಡೇವಿಡ್ ಗ್ಯುಟ್ಟಾ ಬೆಂಗಳೂರು ಸಂಗೀತೋತ್ಸವ ರದ್ದು!

Header Banner

ಡೇವಿಡ್ ಗ್ಯುಟ್ಟಾ ಬೆಂಗಳೂರು ಸಂಗೀತೋತ್ಸವ ರದ್ದು!

  Thu Jan 12, 2017 16:19        Kannada

ಬೆಂಗಳೂರು: ಫ್ರೆಂಚ್ ಡಿಜೆ ಡೇವಿಡ್ ಗ್ಯುಟ್ಟಾ ಅವರ ಬೆಂಗಳೂರು ಸಂಗೀತೋತ್ಸವವನ್ನು ರದ್ದು ಮಾಡಲಾಗಿದೆ. ಹೊಸ ವರ್ಷಾಚರಣೆ ವೇಳೆ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿ ಗ್ಯುಟ್ಟಾ ಅವರ ಸಂಗೀತೋತ್ಸವವನ್ನು ರದ್ದು ಮಾಡಲಾಗಿದೆ.
ನವದೆಹಲಿ, ಮುಂಬೈ, ಹೈದರಾಬಾದ್, ನವದೆಹಲಿ ಸೇರಿದಂತೆ ಭಾರತದ ನಾಲ್ಕು ನಗರಗಳಲ್ಲಿ ನಡೆಯಲಿರುವ ಸಂಗೀತೋತ್ಸವ ಬೆಂಗಳೂರಿನಿಂದ ಪ್ರಾರಂಭವಾಗಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ನಂತರ ಇರುವ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂಗೀತೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಫ್ರೆಂಚ್ ಡಿಜೆ ಡೇವಿಡ್ ಗುಟ್ಯಾ ಕಾರ್ಯಕ್ರಮವನ್ನು ನಡೆಸಲು ಸಾಕಷ್ಟು ಪ್ರಯತ್ನಿಸಲಾಯಿತಾದರೂ ಸಾಧ್ಯವಾಗಲಿಲ್ಲ. ಅಧಿಕಾರಿಗಳಿಂದ ಅನುಮತಿ ಸಿಕ್ಕರೆ ಪುನಃ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ಬೆಂಗಳೂರು ಹೊರತುಪಡಿಸಿ ನವದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಕಾರ್ಯಕ್ರಮ ಪೂರ್ವನಿಗದಿಯಂತೆಯೇ ನಡೆಯಲಿದೆ.   French DJ David Guetta, Bengaluru concert, ಫ್ರೆಂಚ್ ಡಿಜೆ, ಡೇವಿಡ್ ಗ್ಯುಟ್ಟಾ, ಸಂಗೀತೋತ್ಸವ