ಕಿಚ್ಚ ಸುದೀಪ್‌ ಚಿತ್ರಕ್ಕೆ ರಿಷಬ್ ಶೆಟ್ಟಿ ಆಕ್ಷನ್ ಕಟ್

Header Banner

ಕಿಚ್ಚ ಸುದೀಪ್‌ ಚಿತ್ರಕ್ಕೆ ರಿಷಬ್ ಶೆಟ್ಟಿ ಆಕ್ಷನ್ ಕಟ್

  Thu Jan 12, 2017 13:29        Cinemas, Kannada

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಸಿನಿಮಾ ಗೆ ಈಗಷ್ಟೆ ಆಕ್ಷನ್‌ ಕಟ್ ಹೇಳಿ, ಚಿತ್ರದ ಯಶಸ್ವಿಯಲ್ಲಿರುವ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಬಾಯಿ ಬಿಟ್ಟಿದ್ದಾರೆ. ರಿಷಬ್ ನಿರ್ದೇಶನ ಮಾಡಬೇಕೆಂದಿರುವ ಮುಂದಿನ ಸಿನಿಮಾದ ಬಗ್ಗೆ ಯಾವಾಗಲು ಕನಸು ಕಾಣುತ್ತಿದ್ದರಂತೆ. ಆ ಕಾಲ ಈಗ ಹತ್ತಿರ ಬಂದಿದೆಯಂತೆ.

ರಿಷಬ್ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾದ ಹೆಸರೇನು, ಯಾವಾಗ ಶೂಟಿಂಗ್ ಶುರುವಾಗುತ್ತೆ ಅಂತ ಮಾತ್ರ ಹೇಳಿಲ್ಲ. ಆದ್ರೆ ಆಕ್ಷನ್‌ ಕಟ್‌ ಹೇಳುತ್ತಿರುವುದು ಮಿಸ್ಟರ್ ಹೆಬ್ಬುಲಿ ಕಿಚ್ಚ ಸುದೀಪ್‌ ಅಭಿನಯಿಸಲಿರುವ ಚಿತ್ರಕ್ಕೆ ಎಂಬುದನ್ನು ಮಾತ್ರ ಬಾಯಿಬಿಟ್ಟಿದ್ದಾರೆ.

"ಕಿಚ್ಚ ಸುದೀಪ್ ಜೊತೆಗೆ ನನ್ನ ಮುಂದಿನ ಪ್ರಾಜೆಕ್ಟ್ ಎಂದು ಹೇಳಿದ ಮೇಲೆ ಹಲವು ಪ್ರಶ್ನೆಗಳು ಬರುತ್ತಿದ್ದವು. ಈಗ ನಾನು ಖಚಿತ ಪಡಿಸುತ್ತಿರುವುದು ಏನೆಂದರೆ #thugsofmalgudi ಅನ್ನು ಮೈ ಡಿಯರ್ ಫ್ರೆಂಡ್ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡುತ್ತಾರೆ. ನಂತರ ಶೀಘ್ರವಾಗಿ ನಾನು ಕಿಚ್ಚ ಸುದೀಪ್‌ ಚಿತ್ರವನ್ನು ನಿರ್ದೇಶನ ಮಾಡುತ್ತೇನೆ", ಎಂದು ರಿಷಬ್ ಶೆಟ್ಟಿ ಫೇಸ್‌ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ.

"ನನ್ನ ಮುಂದಿನ ಪ್ರಾಜೆಕ್ಟ್ ನಾನು ಯಾವಾಗಲು ವರ್ಕ್‌ ಮಾಡಬೇಕು ಎಂದು ಕನಸು ಕಾಣುವ #ಕಿಚ್ಚ ಸುದೀಪ್ ಜೊತೆ. ಥ್ಯಾಕ್ ಸುದೀಪ್‌ ಸರ್ ಲವ್‌ ಯು', ಎಂದು ರಿಷಬ್ ಖುಷಿಯಲ್ಲಿ ಟ್ವೀಟ್ ಮಾಡಿದ್ದಾರೆ.


   actor sudeep, sudeep next movie, sudeep remake movie, sudeep movies in 2017