ಅವಿಯಲ್

Header Banner

ಅವಿಯಲ್

  Thu Dec 29, 2016 17:09        Kannada, Recipes

ಬೇಕಾಗುವ ಪದಾರ್ಥಗಳು 

 • ತೆಂಗಿನ ಕಾಯಿ - 1 ಬಟ್ಟಲು

 • ಎಣ್ಣೆ - 4 ಚಮಚ

 • ಸಾಸಿವೆ - ಸ್ವಲ್ಪ

 • ಇಂಗು - ಸ್ವಲ್ಪ

 • ಅರಿಶಿನ ಪುಡಿ - ಅರ್ಧ ಚಮಚ

 • ಜೀರಿಗೆ - ಸ್ವಲ್ಪ

 • ಹಸಿಮೆಣಸಿನ ಕಾಯಿ - 10

 • ಉಪ್ಪು - ರುಚಿಗೆ ತಕ್ಕಷ್ಟು

 • ಮೊಸರು - 500 ಗ್ರಾಂ

 • ಕೊಬ್ಬರಿ ಎಣ್ಣೆ - 1 ಚಮಚ

 • ಕರಿಬೇವು - 1 ಕಡ್ಡಿ

 • ತರಕಾರಿಗಳು- ಬೂದುಗುಂಬಳಕಾಯಿ, ಸಿರಿಗುಂಬಳಕಾಯಿ, ಹುರುಳಿಕಾಯಿ, ಕ್ಯಾರೆಟ್, ಸುವರ್ಣಗೆಡ್ಡೆ, ನುಗ್ಗೆಕಾಯಿ ಎಲ್ಲಾ ಸೇರಿಸಿ ಅರ್ಧ ಕೆಜಿ

ಮಾಡುವ ವಿಧಾನ... 

 • ಎಣ್ಣೆ ಕಾಯಿಸಿ, ಸಾವಿವೆ ಹಾಕಿ ಒಗ್ಗರಣೆ ಮಾಡಿ ಅದರಲ್ಲಿ ತರಕಾರಿಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು. ತರಕಾರಿಗಳನ್ನು ಸ್ವಲ್ಪ ತೆಳ್ಳಗೆ ಉದ್ದುದ್ದವಾಗಿ ಹೆಚ್ಚಿರಬೇಕು. ತೆಂಗಿನ ತುರಿ, ಜೀರಿಗೆ, ಹಸಿಮೆಣಸಿನಕಾಯಿ, ಉಪ್ಪು, ಇಂಗು, ಅರಿಶಿನ ಎಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.

 • ಬೆಂದ ತರಕಾರಿಗೆ ರುಬ್ಬಿದ ಮಿಶ್ರಣ ಹಾಕಿ ಕುದಿಸಿ. ಆರಿದ ಮೇಲೆ ಮೊಸರನ್ನು ಕಡೆದು ಬೆರೆಸಿ. ಕೊಬ್ಬರಿ ಎಣ್ಣೆಯನ್ನು ಬೆಚ್ಚಗೆ ಮಾಡಿ ಅದಕ್ಕೆ ಕರಿಬೇವನ್ನು ಹಾಕಿ ಅವಿಯಲ್ ಗೆ ಬೆರಿಸಿದರೆ, ರುಚಿಕರವಾದ ಅವಿಯಲ್ ಸವಿಯಲು ಸಿದ್ಧವಾಗುತ್ತದೆ. ಇದು ಸ್ವಲ್ಪ ಮುದ್ದೆಯಾಗಿ ಇರುತ್ತದೆ.

 
 


   Recipe, Avial, Cooking, Veg, ಪಾಕ ವಿಧಾನ, ಅವಿಯಲ್, ಅಡುಗೆ, ಸಸ್ಯಾಹಾರ,Alasanda Vada