ಚೀನಾದಲ್ಲಿ 1,93,611 ಕಾರುಗಳನ್ನು ವಾಪಸ್ ಪಡೆಯಲಿರುವ ಬಿಎಂಡಬ್ಲ್ಯೂ

Header Banner

ಚೀನಾದಲ್ಲಿ 1,93,611 ಕಾರುಗಳನ್ನು ವಾಪಸ್ ಪಡೆಯಲಿರುವ ಬಿಎಂಡಬ್ಲ್ಯೂ

  Mon Dec 26, 2016 15:33        Auto, Kannada

ಜರ್ಮನಿಯ ಆಟೊಮೊಬೈಲ್ ಬಿಎಂಡಬ್ಲ್ಯೂ ಚೀನಾದಲ್ಲಿ 1,93,611 ಕಾರುಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ.
ಏರ್ ಬ್ಯಾಗ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಎಂಡಬ್ಲ್ಯೂ ಈ ನಿರ್ಧಾರ ತೆಗೆದುಕೊಂಡಿದ್ದು, 2005 ರ ಡಿಸೆಂಬರ್ 9 ರಿಂದ 2011 ರ ಡಿ.23 ರ ವರೆಗೆ ಉತ್ಪಾದನೆಯಾದ ರಫ್ತು ಮಾಡಿದ 1,93,611 ಕಾರುಗಳನ್ನು ವಾಪಸ್ ಪಡೆಯಲು ಮುಂದಾಗಿದೆ. ಇನ್ನು 2005 ರ ಜುಲೈ 12 2011 ರ ಡಿಸೆಂಬರ್ 31 ರ ವರೆಗೆ ಉತ್ಪಾದನೆಯಾದ ಐಷಾರಾಮಿ ಸೆಡಾನ್ ಕಾರುಗಳನ್ನೂ ಸಹ ವಾಪಸ್ ಪಡೆಯಲು ಬಿಎಂಡಬ್ಲ್ಯೂ ನಿರ್ಧರಿಸಿದೆ.
2017 ರ ಆಗಸ್ಟ್ 1 ರ ನಂತರ ಕಾರುಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಬಿಎಂಡಬ್ಲ್ಯೂ ಸಂಸ್ಥೆಯ ಗುಣಮಟ್ಟದ ಮೇಲ್ವಿಚಾರಣೆ ವಿಭಾಗದ ಸಿಬ್ಬಂದಿಗಳು ತಿಳಿಸಿದ್ದಾರೆ. ಕಾರುಗಳಲ್ಲಿ ಅಪಘಾತವಾದಾಗ ಏರ್ ಬ್ಯಾಗ್ ತೆರೆದುಕೊಳ್ಳುವುದಕ್ಕೆ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಾರುಗಳನ್ನು ವಾಪಸ್ ಪಡೆದು ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಂಸ್ಥೆ ಭರವಸೆ ನೀಡಿದೆ.   BMW, China, airbags, ಬಿಎಂಡಬ್ಲ್ಯೂ, ಚೀನಾ, ಕಾರು, ಏರ್ ಬ್ಯಾಗ್,German automaker BMW,watchdog